Showing posts with label ಯಾರು ಸರಿ ಯಾರು ತಪ್ಪು ಎಂಬುದಕ್ಕಿಂತ ಯಾವುದು ಸರಿ ಯಾವುದು ತಪ್ಪು ಎನ್ನುವುದು ಮುಖ್ಯ.. Show all posts
Showing posts with label ಯಾರು ಸರಿ ಯಾರು ತಪ್ಪು ಎಂಬುದಕ್ಕಿಂತ ಯಾವುದು ಸರಿ ಯಾವುದು ತಪ್ಪು ಎನ್ನುವುದು ಮುಖ್ಯ.. Show all posts

Sunday, 7 December 2014

ಸರಿ-ತಪ್ಪು ಮತ್ತು ಒಪ್ಪು....

ಸರಿ-ತಪ್ಪು ಎನ್ನುವ ಅನುಭವದ ಮಹತ್ತರ ಪಾಠವನ್ನು ಜೀವನದ ತರಗತಿಯಲ್ಲಿ ಎಲ್ಲರೂ ಕಲಿಯಲೇಬೇಕು.
ಸರಿ ಎಂಬುದು ಸರಿ, ತಪ್ಪು ಎಂಬುದು ತಪ್ಪು; ಇದು ಕಾಲ ಸತ್ಯ.
ಈ ಸತ್ಯದ ಅರಿವಿದ್ದರೂ ಕೆಲ ಸಲ ಸರಿಯಾದುದನ್ನು ತಪ್ಪಾಗಿ ತಪ್ಪಾದುದುದನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಾದ ಸಂದರ್ಭಗಳು ಒದಗಿ ಬರುತ್ತವೆ.
ಇಂತಹ ಸಮಯದಲ್ಲಿ ಸರಿ-ತಪ್ಪುಗಳು ಎರಡು ವಿಭಿನ್ನ ಆಯ್ಕೆಗಳಾಗಿರುತ್ತವೆ.
ನಮಗೆ ಸರಿ ಕಂಡದ್ದು ಬೇರೆಯವರಿಗೆ ತಪ್ಪಾಗಿ , ಬೇರೆಯವರಿಗೆ ಸರಿ ಕಂಡದ್ದು ನಮಗೆ ತಪ್ಪಾಗಿ ಕಾಣಬಹುದು.
ಹೊಂದಾಣಿಕೆ ಎಂಬುದು ಈ ಸರಿ ತಪ್ಪುಗಳ ಸರಿ ರೂಪ ತೊರುವ ಮಾರ್ಗಸೂಚಿ.
ಹೊಂದಾಣಿಕೆ ಸುಲಭದ ಮಾತೂ ಅಲ್ಲ. ಬೇರೆಯವರ ಅಭಿಪ್ರಾಯ-ಅಭಿರುಚಿಗಳನ್ನು ಗೌರವಿಸುವ ಗುಣವಿದ್ದಲ್ಲಿ ಮಾತ್ರ ಹೊಂದಾಣಿಕೆ ಸಾಧ್ಯ. ಯಾರು ಸರಿ ಯಾರು ತಪ್ಪು ಎಂಬುದಕ್ಕಿಂತ ಯಾವುದು ಸರಿ ಯಾವುದು ತಪ್ಪು ಎನ್ನುವುದು ಮುಖ್ಯ.ಇದನ್ನು ಮನಗಂಡು ಸರಿ-ತಪ್ಪುಗಳನ್ನು ಒಪ್ಪಿದಾಗ ಬಾಳು ಸದಾ ಸಮರಸದ ರಸದೌತಣವಾಗಿರುತ್ತದೆ.