FBಲೀ ತುಂಬಾ Years Ago ಗೀಚಿದ್ದು :
ಶಾಪಿಂಗ್ ಮುಗಿಸಿ ಮನೆಗೆ ಬರುವಾಗ ಅಚಾನಕ್ ಆಗಿ ಅಣ್ಣ-ಅತ್ತಿಗೆ ಸಿಕ್ರು. . ತುಂಬಾ ದಿನಗಳ ನಂತರ ಭೇಟಿಯಾಗಿದ್ದರಿಂದ ಬೇಡ ಬೇಡ ಅಂದ್ರು ಒತ್ತಾಯಿಸಿ ಮನೆಗೆ ಕರೆದುಕೊಂಡು ಹೋದರು. . ನಮ್ಮೆಲ್ಲರ ಹಾಳು ಹರಟೆ ತರಲೆ ಕಿಟಲೇ ಆದಮೇಲೆ ಅತ್ತಿಗೆ ನನ್ನ favourite dishes cook ಮಾಡಿದ್ರು, ಹೇಗೂ ನನ್ ಕಾಲೇಜಿನ vacation holidays ಇರೊದ್ರಿಂದ ನಾನು ಸಖತ್ ಆಗಿ ಊಟ ಮಾಡಿ ನನ್ನ ಮನೆಗೆ ಹೊರಡಲು ready ಆದೆ ಸಮಯ ಹತ್ತಾಗಿತ್ತು, ಹೊತ್ತಾಗಿದೆ ನಾಳೆ ಹೋಗು ಅಂದ್ರು ಕೇಳಲಿಲ್ಲ, ಹಟ ಮಾಡಿ ಮನೆ ಮನೆಗೆ ಹೊರಟೆ ಅರ್ಧ ದಾರಿ ತಲುಪಿದ್ದೆ ಎಲ್ಲಿತ್ತೋ ಏನೊ ಮಳೆ ಧೋ ಅಂತ ಶುರುವಾಗೇ ಬಿಟ್ಟಿತು. .
ಸಿಕ್ಕಿದ್ದೇ chance ಅಂತ ಮಳೆಲಿ ನೆನಕೊಂಡು ಮನೆಗೆ ಬಂದೆ :) , ಅಮ್ಮ ಮಳೇಲಿ ಯಾಕೆ ಬಂದೆ ಅಂತ ಬೈದ್ರು, ಸುಮ್ಮನೆ ಬೈಗುಳಾನೇ ಜೋಗುಳ ಅಂದುಕೊಂಡು ಮಲಗಿದೆ..! ಬೆಳಿಗ್ಗೆ ಕಣ್ಣು ಬಿಟ್ಟಾಗ ಸಮಯ ಬರೋಬ್ಬರಿ ಒಂಬತ್ತು ವರೆ!!!
ದಿನಾ ಬೆಳಿಗ್ಗೆ ಕೌಶಲ್ಯ ಸುಪ್ರಜಾ ರಾಮ ಪೂರ್ವ ಸಂಧ್ಯಾ ಪ್ರವರ್ತತೇ, ರಾಮ ನಾಮ, ಹರಿ ನಾಮ, ದೇವಿ ಸ್ತುತಿ ಇನ್ನೂ ಏನೇನೋ ದೇವರ ನಾಮಗಳಿಂದ ಶುರುವಾಗೋ ದಿನ ಇವತ್ತು ನನ್ನ ನಾಮಾವಳಿ ಮನೇಲಿ..! ;)
ಹೆಣ್ಣು ಮಕ್ಕಳು ಬೇಗ ಎದ್ದೇಳಬೇಕು, ರಜೆ ಸಿಕ್ರೇ ನಂಗೆ ಸಜೆ, ತುಂಬಾ ಆಲಸಿ ನೀನು ಅಂತ ಅಮ್ಮ ಬೆಳಗಿನಿಂದ ಬೈತಾನೇ ಇದ್ದಾರೆ, ನಾನ್ ಯಾವಾಗ ದೇವರನ್ನೇ replace ಮಾಡಿದೆ ಇದು ನನ್ನ ಹೆಸರಿನ effect ಇರಬಹುದು ಹೆಸರಿನಲ್ಲೇನಿದೆ ಅಂತ ಕೇಳ್ತಿದ್ದ ನಂಗೆ ಒಳ್ಳೆ ಉತ್ತರ ಸಿಕ್ತು ಅಂದುಕೊಂಡು hot coffee ಜೊತೆ newspaper ಓದುತ್ತಿರುವಾಗ ಶುರುವಾಯ್ತು ನೋಡಿ morning pings. .hi, hello good morning, coffee?tea? Tiffin? ಅಂತ ಆ ಕಡೆಯಿಂದ friends ಕುಶಲೋಪರಿ enquiry. .
ನನ್ನ ಸುಪ್ರಭಾತ ಕತೆ ಕೇಳಿ ನನ್ನ ಒಬ್ಬಳು ತುಂಬಾ ಆತ್ಮೀಯ one among my sisters ತರಹ ಇರೋ friend ಮೇಘಾ ನಿಂತಳು ಅಮ್ಮಂಗೆ supportive ಆಗಿ ನಂಗೆ oppose ಮಾಡ್ತಾ ಒಂದು ದೊಡ್ಡ lecture ಕೊಟ್ಟು you are not a baby still c'mon be responsible learn house hold works, mom will not come to your hubby home to help you out all the time, to serve till your table ಈಗಾಗಲೇ ಕಲಿಲಿಲ್ಲಾ ಅಂದರೆ ಇನ್ ಯಾವಾಗ ಕಲಿತಿ ಅಂತ ನನ್ನ vacation holidaysನಾ working days ಆಗಿ convert ಮಾಡಿ take care ಅಂತ ಹೇಳಿ ಹೋದಳು.!
ನಾನೋ easy taking bubbly natured cool minded girl ಯಾರ ಬುದ್ದಿವಾದವನ್ನು ತಪ್ಪಾಗಿ ಪರಿಗಣಿಸದ life is all about learning ಅಂದುಕೊಂಡಿರೊ ಭಾವನಾತ್ಮಕ ಜೀವಿ, ಅಮ್ಮನನ್ನು ರಮಿಸಿ ನಮಿಸಿ ಕೈಲಾದಷ್ಟು ಅವಳಿಗೆ ಸಹಾಯ ಮಾಡಿ, ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಎಂದು ಗುನುಗುತ್ತಾ, ಕಳೆದೆರಡು ತಿಂಗಳ ಹಿಂದೆ ಅರ್ಧಕ್ಕೆ ಓದಲು ನಿಲ್ಲಿಸಿದ The Epigenetics Revolution ಪುಸ್ತಕವನ್ನು ಕೈಗೆತ್ತಿಕೊಂಡೆ..
ಅಂದು ಸುಮ್ನೆ ತೋಚಿದ್ದು ಹಾಗೆ ಗೀಚಿದ್ದು.....
-Archiees after a long time :)
You learn much about household works... Still remember the taste of uppittu...
ReplyDeleteHe he he��
ReplyDelete