ನಾವು ಎಷ್ಟೇ ಕಲಿತು graduates, post graduates, doctorates, many more ಆಗಿದ್ರೂ, ಪ್ರಕೃತಿ, ಸೂರ್ಯ, ಚಂದ್ರ, ಚುಕ್ಕಿ, ತಾರೆ, ನಭೋಮಂಡಲ ಮುಂತಾದವುಗಳ ಕುರಿತು ಸಾಕಷ್ಟು ಮಾಹಿತಿ ದೊರೆತಿದ್ದರೂ, ಸೂರ್ಯ-ಚಂದ್ರ ಇದ್ದಲ್ಲೇ ಇರ್ತಾರೆ, ಭೂಮಿ ತಿರುಗುತ್ತದೆ, day and night occurs due to the rotation of earth on its axis..ಅನ್ನೋ fact ಗೊತ್ತಿದ್ರೂ ಅದೇಕೋ ಏನೋ ಗೊತ್ತಿಲ್ಲ ನನಗೆ sunrise sunset ನೋಡಿದಾಗಲೆಲ್ಲ ಮತ್ತು shifts ಮೇಲೆ work ಮಾಡೋ techies ನೋಡಿದಾಗಲೆಲ್ಲ "ನನ್ನ ಅಮ್ಮ" ನೆನಪಾಗ್ತಾಳೆ. .
ಚಿಕ್ಕಂದಿನಲ್ಲಿ ಅಮ್ಮ ನನಗೆ ಊಟ ಮಾಡಿಸ್ತಿರೋವಾಗ ಅಮ್ಮ ಸೂರ್ಯ ಸಂಜೆಯಾದ ಮೇಲೆ ಎಲ್ಲಿ ಹೋಗ್ತಾನೆ ಅಂತ ಕೇಳಿದಾಗ, ಸೂರ್ಯ-ಚಂದ್ರ ಭೂಮಿ ತಾಯಿಯ ಎರಡು ಮಕ್ಕಳು..ಸಂಜೆಯಾದ ಮೇಲೆ ಸೂರ್ಯ ಅಮ್ಮನ ಹತ್ತಿರ ಹೋಗ್ತಾನೆ ಊಟ ಮಾಡಿ rest ಮಾಡಿ ಬೆಳಿಗ್ಗೆ ಬರ್ತಾನೆ ಅಲ್ಲಿವರೆಗೂ ಚಂದ್ರ ಭೂಮಿ ಕಾಯ್ತಾನೆ. .ಮತ್ತೇ ಬೆಳಿಗ್ಗೆ ಸೂರ್ಯನ ಪಾಳಿ. . ಅಮ್ಮ ಹೇಳಿದ ಆ ಕತೆ ಎಷ್ಟೊಂದು ಸುಂದರ. . ಸೂರ್ಯಾಸ್ತ-ಸೂರ್ಯೋದಯ ನೋಡೋದಂದ್ರೆ ನಂಗೆ ಪಂಚಪ್ರಾಣ, ತುಂಬಾ ಖುಷಿ.. ಆ ವೇಳೆ ಬಾನಲ್ಲಿ ಮೂಡಿದ ಚಿತ್ತಾರ ನೋಡಿದಾಗಲೆಲ್ಲ ಅಮ್ಮ ಮತ್ತು ಅಮ್ಮ ಹೇಳಿದ ಆ ಕತೆ ನನ್ನೆದೆಲಿ ಬೆಚ್ಚನೆಯ ಅನುಭವ ನೀಡುತ್ತದೆ. .
love u lots ಅಮ್ಮ
Monday, 20 March 2017
ಒಂದು ಸುಂದರ ಸಂಜೆ
Labels:
ಅಮ್ಮ,
ಒಂದು ಸುಂದರ ಸಂಜೆ,
ಕಥೆ,
ಬಾಲ್ಯ
Subscribe to:
Post Comments (Atom)
Alwa?😃
ReplyDelete