ಡಿಸೆಂಬರ್... ಹನ್ನೆರಡು ತಿಂಗಳುಗಳ ವರ್ಷದ ಕೊನೆಯ ತಿಂಗಳು. ಹೊಸ ವರ್ಷದ ಹೊಸ್ತಿಲಲ್ಲಿ ಕುಳಿತಿರುವ ಈ ತಿಂಗಳಿಗೆ ಸದಾ ಹೊಸತನದ ಆಗಮನದ ಸಂಭ್ರಮ. ಆದರೆ ಬಹುಶಃ ಚಳಿಗಾಲದಲ್ಲಿ ಬರುವುದರಿಂದ ಏನೋ ಗೊತ್ತಿಲ್ಲ ಒಂದು ರೀತಿ ಈ ತಿಂಗಳು ಪ್ರತಿ ಬಾರಿ ಸಂತೋಷದ ಜೊತೆ ಜೊತೆಗೆ ಬೇಸರದ ನಡುಕವನ್ನು ಮೂಡಿಸುತ್ತದೆ.
ಮನಸ್ಸು ಹೊಸತನದ ನಿರೀಕ್ಷೆ, ಹೊಸ ವರ್ಷದಾಗಮನದ ತಯಾರಿ ನಡೆಸಿರುವಾಗ ನಮಗೆ ಗೊತ್ತಿಲ್ಲದಂತೆ ಮನಸ್ಸು ಮಂಕಾಗಿ ಕಳೆದ ಡಿಸೆಂಬರ್ ತಿಂಗಳಿಗೆ ಹಾರಿ ಬಿಡುತ್ತದೆ. ಕಳೆದ ವರ್ಷ ಮಾಡಿದ ಹೊಸ ನಿರ್ಧಾರಗಳು, ನಮಗೆ ನಾವೇ ಕೊಟ್ಟ ಭರವಸೆಗಳು, ಹೊಸ ವರ್ಷದಲ್ಲಿ ಮಾಡಬೇಕಾದ ಪ್ರವಾಸಗಳು, ಹೊಸ ವರ್ಷದಲ್ಲಿ ಓದಬೇಕೆಂದು ನಿರ್ಧರಿಸಿ ನಿಗದಿಪಡಿಸಿದ ಹೊತ್ತಿಗೆಗಳು, ಮಾಡಬೇಕಾದ ಹೊಸ ಕಾರ್ಯಗಳು, ಕೈ ಬಿಡಬೇಕಾದ ಕೆಲ ಅವಗುಣಗಳು, ರೂಢಿಗತ ಮಾಡಿಕೊಳ್ಳಬೇಕಾದ ಕೆಲ ಹೊಸ ಗುಣಗಳು, ಪಾಠಗಳು, ಪರೀಕ್ಷೆ-ನಿರೀಕ್ಷೆ.. ಹೀಗೆ ಕಳೆದ ವರ್ಷದ things to do this year ಅನ್ನೋ ಲಿಸ್ಟ್ ನ ಹತ್ತು ಹಲವು ನೆರವೇರದ ಸಂಗತಿಗಳು ಮನದ ಕಿಟಕಿಯಿಂದ ಹೊರ ಇಣುಕಿ ಅಣುಕುತ್ತಿವೆ.
ಈ ವರ್ಷ ಇದನ್ನು ಖಂಡಿತ ಮಾಡುವೆನು ಎನ್ನುತ್ತ ಪ್ರತಿ ವರ್ಷವೂ ಪ್ರತಿ ಸಲವೂ ನೆರವೇರದ ಸಂಗತಿಗಳ ನೆರವೆರಿಕೆಗೆ ನಮಗೆ ನಾವೇ ಕೊಡುವ ಮಾತಿನ ಭರವಸೆ ಹೇಳು ಹೆಸರಿಲ್ಲದೆ ಪಲಾಯನವಾದ ಪಾಲಿಸುವ, ಅಪೂರ್ಣವಾಗಿ ಉಳಿದ ವಿಷಯಗಳು, ಕೆಲವು ಸಲ ಇವೆಲ್ಲ funny ಅನ್ನೋ feel ಮೂಡಿಸಿದರೂ ಅದನ್ನೆಲ್ಲ ಸೀರಿಯಸ್ ಆಗಿ ಪರಿಗಣಿಸಲೇಬೇಕು.
ಇವೆಲ್ಲದರ ನಡುವೆ ಈ ವರ್ಷ ಕೊನೆಗೊಳ್ಳುತ್ತಿದೆ ಅನ್ನೋದು ನಂಬಲಸಾಧ್ಯ. ಪರಿಪೂರ್ಣವಾಗಿ ಕಾರ್ಯಗತಗೊಳಿಸಿದ ಕೆಲ ಸಂಗತಿಗಳ ಹೆಮ್ಮೆ ಒಂದೆಡೆಯಾದರೆ ಮತ್ತೊಂದೆಡೆ ಮನಸ್ಸು ಮತ್ತೊಂದು ಹೊಸ ಆಶಯಗಳ, ಹಳೆಯ ಅಪೂರ್ಣ ಕಾರ್ಯಗಳ ಪೂರ್ಣಗೊಳಿಸುವ ಭರವಸೆಗಳ, ಮತ್ತಷ್ಟು ಹೊಸ ನಿರ್ಧಾರ ಕನಸುಗಳ ಪಟ್ಟಿ ಸಿದ್ಧವಾಗುತ್ತಿದೆ. ಇವೆಲ್ಲವನ್ನೂ ನನಸುಗೊಳಿಸೋ ಆಸೆ ಆಶಾವಾದಿಗಳದ್ದಾದರೆ ಆಯುಷ್ಯದಲ್ಲಿ ಒಂದು ವರ್ಷ ಕಡಿಮೆಯಾಯಿತು ಅನ್ನೊ ಗೋಳು ನಿರಾಶಾವಾದಿಗಳದ್ದು.
ಏನೇ ಆಗಲಿ ಪ್ರತಿ ಕ್ಷಣ ಪ್ರತಿ ದಿನ ಪ್ರತಿ ವರ್ಷ ಎಲ್ಲ ಹೊಸ ಹೊಸತು..
ಹೊಸ ವರ್ಷದ ಬಾಗಿಲಲ್ಲಿ ಹೊಸ ಕನಸುಗಳೊಂದಿಗೆ ಹೊಸ ವರ್ಷದ ಬಾಗಿಲು ತೆರೆದು ಸಂಭ್ರಮಿಸಲು ಕುಟುಂಬ, ಸ್ನೇಹಿತರು, ಬಂಧುಗಳು, ನ್ಯೂ ಇಯರ್ ಪಾರ್ಟಿ, ಫಾರ್ಮ್ ಹೌಸ್ ಹೀಗೆ so many choices... :) :)
ಈ ವರ್ಷ ಕೊನೆಗೊಳ್ಳುತ್ತಿದೆ ಹೊಸ ವರ್ಷಕ್ಕೆ ಹೊಸ ಕನಸುಗಳನ್ನು ಹೆಣೆಯಲು ಸಜ್ಜಾಗೋಣ :) :)
Wednesday, 3 December 2014
ಹೊಸ ವರ್ಷಕ್ಕೆ ಹೊಸ ಕನಸುಗಳನ್ನು ಹೆಣೆಯಲು ಸಜ್ಜಾಗೋಣ :) :)
Subscribe to:
Post Comments (Atom)
No comments:
Post a Comment