ಅದೊಂದಿನ ತುಂಬಾ ದಿನಗಳ ನಂತರ ನನ್ನ ಫೋನಿನ ಪ್ಲೇ ಲಿಸ್ಟ್ನಲ್ಲಿ ಪ್ಲೇ ಆಗ್ತಾ ಇದ್ದ ಹಾಡಿನ ಸಾಲದು: 'ನೆನಪಿನ ಚಿಲಕ ಸರಿವ ಸದ್ದಿಗೆ was there a sound knock knock. . whose at the door knock knock. . could it be you knock knock. .'
ಹಾಡು ಸಾಗಿದಂತೆ ನೆನಪಿನ ನವಿಲು ಗರಿ ಮನದಂಚಲಿ ಗರಿಗೆದರಿತು. .
ಮನೆಗೆ ಹೋದಾಗ್ಲೆಲ್ಲ ಹಾಗೆ,ವಾಪಸ್ ಬರಬೇಕೆಂದು ಅನಿಸೋದೇ ಇಲ್ಲ . ಆಕಾಶದಂತಿರೋ ಅಪ್ಪ- ಅಮ್ಮ, ಸ್ನೇಹಿತರಿಗಿಂತಲೂ ಹೆಚ್ಚಿರುವ ತಂಗಿಯರು,ಅಕ್ಕ-ಅಣ್ಣಂದಿರು, ಮುಗ್ದ ದೊಡ್ಡಮ್ಮ ದೊಡ್ಡಪ್ಪ, ಪುಟಾಣಿ ಸಮನ್ವಿತಾ ಜೊತೆ ಓಡಾಡಿಕೊಂಡು ಇರಬೇಕು ಎಂದೆನಿಸುತ್ತದೆ .
ಅದ್ಯಾಕೆ ಹಾಗಾಗತ್ತೋ ಗೊತ್ತಿಲ್ಲ ಪ್ರತಿಸಲ ಮನೆಯಿಂದ ಹೊರಡುವ ಹಿಂದಿನ ದಿನ ನನ್ನ ರೂಮು,ನನ್ನ ಮನೆ, ನನ್ನೂರು, ಅದೆಲ್ಲವನ್ನು miss ಮಾಡ್ತೇನೆ . ಕೊನೆಗೆ ನನ್ನ ಡ್ರೆಸ್ಸಿಂಗ್ ಟೇಬಲ್,ಮಂಚ, PC ಎಲ್ಲವನ್ನೂ ಪ್ರೀತಿಯಿಂದ ಸವರಿ ಮನೆಯ ಟೆರೆಸ್ ಮೇಲೆ ಕುಳಿತು ಸಂಜೆಯ ಸುಂದರ ಹೊಂಬೆಳಕ ಆಕಾಶವನ್ನು ಬಿಸಿ ಬಿಸಿ ಕಾಫಿ ಸವಿಯುತ್ತ ನೋಡುತ್ತಿದ್ದರೆ ಮನದೊಳಗೆ ಯೋಚನೆಗಳ ಮೆರವಣಿಗೆ ಹೊರಡುತ್ತವೆ . ಕಣ್ಣೀರು ತುಂಬಿ ಆಗಸ ಮಸುಕಾಗಿ ಕಂಡಾಗಲೇ ಗೊತ್ತಾಗೋದು ಆಗಸದಲ್ಲಿ ನಕ್ಷತ್ರಗಳು ನನ್ನ ಕಣ್ಣಲ್ಲಿ ಹನಿಗಳು ಮೂಡಿವೆ ಎಂದು.
'ಭಾವನೆಗಳ ಮೂಕ ರೂಪವೇ ಈ ಕಣ್ಣ ಹನಿಗಳು. .'! ಶಬ್ದಗಳು ಹೇಳದ ಮಾತುಗಳನ್ನು ಹನಿ ಕಣ್ಣೀರು ಹೇಳುತ್ತದೆ. ನಾಳೆ ಇದೇ ಆಗಸವನ್ನು ಅಲ್ಲಿ ನೋಡಬೇಕಲ್ಲ ಎಂಬ ಯೋಚನೆಗೆ ಕಣ್ಣೀರು ಕೆನ್ನೆಯನ್ನು ತೋಯಿಸಿಬಿಡುತ್ತದೆ. bag pack ಮಾಡಲಂತೂ ಮನಸೇ ಬರುವುದಿಲ್ಲ. ಪ್ರತಿ ಸಲವೂ ಹೊರಡುವಾಗ ಗಡಿಬಿಡಿಯಿಂದ bag pack ಮಾಡೋದು ನೋಡಿ ಅಮ್ಮ ತಂಗಿಯರ ಗೊಣಗಾಟ ಶುರುವಾದಾಗ ಏನೇನೋ ಯೋಚನೆ ಮೂಡುತ್ತವೆ-ಅದ್ಯಾಕೆ ನಮ್ಮನೆ,ನಮ್ಮೂರು, ನನ್ ಫ್ಯಾಮಿಲಿ ಅಂದರೆ ಅಷ್ಟೊಂದು attachment ? ಪ್ರಶ್ನೆಯನ್ನು ಕೇಳಿ ನಾನೇ ಉತ್ತರವನ್ನು ನನಗೆ ತೋಚಿದ ರೀತಿಯಲ್ಲಿ ಇನ್ನೂ ಸ್ವಲ್ಪ ದಿನ ತಾನೆ PG ಮುಗಿದ ಮೇಲೆ ಮತ್ತೆ back to pavilion ಅಂತ ಹೇಳಿ ನಂಗೆ ನಾನೇ ಸಮಾಧಾನ ಮಾಡಿಕೊಳ್ತಿದ್ದೆ..
ಆದ್ರೆ ಈಗ???? God blessed me with my dream boy..He found me when I was looking for him..
ಮದುವೆಯಾಗಿ ಪ್ರೀತಿಯ ಇನ್ನೊಂದು ಗೂಡು ಸೇರಿದ ಬಳಿಕ ನಾ ಬೆಳೆದ ಮನೆಯಂಗಳ, blessing ತರಹ ಇರುವ ಅಪ್ಪ-ಅಮ್ಮ, ಪುಟ್ಟ ತಂಗಿಯರು, ಆತ್ಮೀಯವಾಗಿ ಬರಮಾಡಿಕೊಂಡಂತೆ ಕಾಣುವ ನನ್ನ ರೂಮು, ನೆಟ್ಟಿ ಬೆಳೆಸಿದ ಹೂಗಿಡಗಳು,ಪಿತಾಂಬರ ವರ್ಣದ ದಿಗಂತ ಮತ್ತು ಅದರ ಬೆಳ್ಳಿ ಅಂಚಿನ ಮೋಡಗಳು, ಆ ಮೋಡಗಳಲ್ಲಿ ಕಟ್ಟಿಕೊಂಡ ಕನಸುಗಳು, ಮನೆ ಪಕ್ಕದಲ್ಲೇ ಇರೊ cricket ಸ್ಟೇಡಿಯಂ, ಬಾಲ್ಯದ ಗೆಳತಿ/ ಗೆಳೆಯರು, ಗುಡ್ಡದ ಸೂರ್ಯಾಸ್ತ , ಚಳಿಗಾಲದ ಇಬ್ಬನಿಯ ಬಿಂದುಗಳ ಹೊತ್ತ ಜೇಡರ ಬಲೆ, ರಕ್ತ ಸಂಬಂಧಗಳು .. ಇನ್ನೂ ಏನೇನೋ ..... ನೆನಪಾಗಿ ನನ್ನ ಸುಪ್ತ ಮನಸಿನ ಮೂಲೆಯೊಂದರಲ್ಲಿ ಅಡಗಿ ಕುಳಿತಿರುತ್ತವೆ . ಮನೆಯಿಂದ ಹೊರಡೋದು ಒಂದು ನೆಪವಾಗಿ ಕಾಡುತ್ತವೆ. . ಅದೇ ಎಲ್ಲವನ್ನೂ ಬಿಟ್ಟು ಹೊರಡಬೇಕಲ್ಲ ಎಂದು ಪ್ರತೀ ಬಾರಿ ಮೌನವನ್ನು ಅಪ್ಪುತ್ತೇನೆ, ದುಃಖ ಉಮ್ಮಳಿಸಿದಾಗ ಪಕ್ಕದಲ್ಲೇ ಕೂತಿರುವ ತಂಗಿಯರ common dialogue ಪ್ಲೇ ಆಗುತ್ತದೆ: 'hey mad ಯಾಕ್ ಅಳ್ತೀ??' ಕಾರಣ ಗೊತ್ತಿದ್ದೂ ಕೇಳುವ ಆ ಪ್ರಶ್ನೆಗೆ ತುಸು ಕೋಪದಿಂದಲೇ u will get to know when ur turn comes ಅಂತ ಹೇಳಿ ಅಲ್ಲಿಂದ ಎದ್ದು ಒಳ ನಡೆದಾಗ ಪುಟ್ಟ ತಂಗಿಯ ಕೀಟಲೆ ಶುರುವಾಗುತ್ತದೆ..
PG ದಿನಗಳಲ್ಲಿ bustandಗೆ ಬಿಡಲು ಬರುತ್ತಿದ್ದ ಅಪ್ಪನಿಗೆ ಟಾಟಾ ಹೇಳಿ ಬಸ್ ಏರಿ ಕುರುತ್ತಿದ್ದ ನನಗೆ ಊರನ್ನು ಎಲ್ಲೋ ಖಾಯಂ ಆಗಿ ಬಿಟ್ಟು ಹೋಗೋ ಭಾವನೆ ಆವರಿಸಿಬಿಡ್ತಿತ್ತು .! ಕಣ್ಣಲ್ಲಿ ಜೋಗ ನಯಾಗರ ಜಿನುಗಲು ರೆಡಿಯಾಗಿರುತ್ತಿತ್ತು. .
ಪ್ರತೀ ಸಲ ಅಮ್ಮ ಅಪ್ಪ ನನ್ನ ಹೊಸ ಗೂಡಿಗೆ ಕಳುಹಿಸಲು ಬಂದಾಗ ಇಲ್ಲವೆ ಅವನು ನನ್ನ ಕರೆದುಕೊಂಡು ಹೋಗಲು ಬಂದಾಗ ಕಾರ್ ಹತ್ತಿ ಕುಳಿತಾಗ ಅದೆಲ್ಲಿಂದಲೋ ದುಃಖ ಉಮ್ಮಳಿಸಿ ಬಂದು ಭಾವನೆಗಳ ಸುಳಿಯಲ್ಲಿ ಸಿಕ್ಕಿ ಕಂಗಾಲಾಗುವ ಸ್ಥಿತಿ ವಿವರಿಸಿ ಹೇಳಲಸಾಧ್ಯ.
ಈ ಎಲ್ಲ ಭಾವಗಳ ನಡುವೆ ಮೂಕಸ್ಮಿತಳಾಗಿ ಯೋಚನಾ ಲಹರಿಯಲ್ಲಿ ಕಳೆದು ಹೋದಾಗ ನನ್ನ moible ರಿಂಗಣಿಸಿದಾಗಲೇ ಎಚ್ಚರವಾದದ್ದು .! 'Maa calling' ಎಂದು ತೋರಿಸುತ್ತಿತ್ತು .
ಅಮ್ಮನೊಡನೆ ಮಾತನಾಡಿ ಫೋನ್ ಡಿಸ್ಕನೆಕ್ಟ ಮಾಡಿದ ನಂತರ ನಾ ಪ್ರೀತಿಯಿಂದ teddy ಎಂದು ಕರೆಯುವ ಪುಟ್ಟ ತಂಗಿಯಿಂದ message ಬಂದಿತ್ತು "missing u stupid..come soon and get something for me " ಮೆಸೇಜ್ ಓದಿದ ಬಳಿಕ ಕಣ್ಣೀರ ಸಿಂಚನವಾದ ಮೊಗದಲ್ಲಿ ನಗೆಯ ಹೂಮಳೆ!'
ಜೀವನ ಅಂದ್ರೆ ಹೀಗೆ ಅಲ್ವಾ? ಊರು, ಅಪ್ಪ-ಅಮ್ಮ, ತಂಗಿಯರನ್ನ ನಾನು miss ಮಾಡೋವಂತೆಮಾಡಿ ನನ್ನ ಪ್ರೀತಿಯ ಪ್ರಪಂಚಕ್ಕೆ ಇನ್ನಷ್ಟು ಪ್ರೀತಿಯ ಮಳೆ ಸುರಿದು ಅಪೇಕ್ಷೆಯ ನಿರೀಕ್ಷೆಯಂತೆ ಸಿಕ್ಕ ಪ್ರೀತಿಯ ಯಶ ಜಾರಿಯಲ್ಲಿರಲಿ ಪ್ರೀತಿ ಅನವರತ ಇದೇ ರೀತಿ. . :)
Saturday, 5 September 2015
ಜಾರಿಯಲ್ಲಿರಲಿ ಪ್ರೀತಿ ಅನವರತ ಇದೇ ರೀತಿ..:)
Subscribe to:
Posts (Atom)