ನಾವು ಅವರಂತಿರಬೇಕು ಅವರಂತೆಯೇ ಆಗಬೇಕು ಅವರಂತಹ ಮನೆ ಕಟ್ಟಬೇಕು ಅವರಂತಹ ಕಾರು ಹೊಂದಬೇಕು... ಅಬ್ಬಬ್ಬಾ ಈ ಅವರು ಇವರುಗಳ ಅನುಕರಣೆಯ ಕಾರುಬಾರು ಮಿತಿಮೀರಿದೆ. ಇವೆಲ್ಲದರ ನಡುವೆ ನಾವು ನಮ್ಮ ಸ್ವಂತಿಕೆಯನ್ನೆ ಮರೆತು ಬಿಟ್ಟಿದ್ದೇವೆ.
ನಾವೇಕೆ ಅವರಂತಾಗಬೇಕು? ನಮಗೂ ಒಂದು ಸ್ವಂತ ವ್ಯಕ್ತಿತ್ವವಿದೆ. ನಮ್ಮತನವೆಂಬುದು ನಮ್ಮೊಳಗೆ ಅಡಗಿ ಕುಳಿತಿದೆ. ಅದನ್ನು ದಕ್ಕಿಸಿಕೊಳ್ಳಬೇಕಷ್ಟೆ. ನಾವೆಲ್ಲ ಬೇರೆಯವರ ಮಾದರಿಯಲ್ಲಿ ಬೆಳೆಯಲು ಪೈಪೋಟಿ ನಡೆಸುತ್ತಿದ್ದೇವೆ ಹೊರತು ನಾವೇ ಮಾದರಿಯಾಗಿರಲು ಹಂಬಲವೂ ಇಲ್ಲ ಪ್ರಯತ್ನವೂ ಇಲ್ಲ.
ಈ ಸಮಾಜ ಜೀವನದಲ್ಲಿ ಸಾಕಷ್ಟು ಮಾದರಿಗಳು ಸಿಗುತ್ತವೆ, ಅವುಗಳಲ್ಲಿ ಅನುಸರಿಸಬೇಕಾದ ಅಂಶಗಳು ಸಾಕಷ್ಟಿರುತ್ತವೆ. ಒಳ್ಳೆಯದನ್ನು ಹೆಕ್ಕಿ ತೆಗೆದುಕೊಳ್ಳೊಣ ಆದರೆ ಅವರೇ ನಾವಾದರೆ ನಮ್ಮದೆನ್ನುವುದೇನು ಉಳಿಯಿತು? ಒಳ್ಳೆಯದೆಲ್ಲರ ಕ್ರೋಢಿಕರಣದ ರೂಪ ನಮ್ಮೊಳಗೆ ಇಣುಕಲಿ ಅದರೊಂದಿಗೆ ನಮ್ಮತನವೆಂಬ ಸ್ವಂತಿಕೆಯೂ ವಿಜೃಂಭಿಸಲಿ. ವೈವಿಧ್ಯತೆಯಲ್ಲೂ ಏಕತೆ ಮೆರೆವ ಈ ಜಗತ್ತಿನಲ್ಲಿ ಅದೆಷ್ಟೋ ಬಾರಿ ನಾವು ಎಲ್ಲೋ ಕಳೆದು ಹೊಗಿರುತ್ತೇವೆ. ನಮ್ಮ ಸ್ವಂತ identity ಅನ್ನೋದೆ ಮರೆತಿರುತ್ತೆ.ಅದನ್ನು ಗಳಿಸೊದಷ್ಟೇ ಅಲ್ಲ ಊರ್ಜಿತಗೊಳಿಸೋದು ನಿಜವಾದ ಸವಾಲು.
ಎಲ್ಲರಿಂದ ಇದು ಸಾಧ್ಯವಿಲ್ಲ, ನಾನೇನು ಮಹಾನುಭಾವ ಎನಿಸಿಕೊಳ್ಳಬೇಕಿಲ್ಲ, ನಾನು ಯಾವುದಕ್ಕೂ ಮುಂದಾಳತ್ವ ವಹಿಸಬೇಕಿಲ್ಲ, ಬದುಕಿದಷ್ಟು ದಿನ ನನ್ನ ಪಾಡಿಗೆ ನಾನಿದ್ದುಬಿಡುತ್ತೇನೆ ಅನ್ನೊದ್ರಲ್ಲಿ ಏನು ವಿಶೇಷವಿದೆ? ಪ್ರಾಣಿಗಳೂ ಹಾಗೆಯೇ ಬದುಕುತ್ತವೆ ಅಲ್ಲವೇ? ಹಾಗಿದ್ದಲ್ಲಿ ನಮಗೂ ಪ್ರಾಣಿಗಳಿಗೂ ಏನು ವ್ಯತ್ಯಾಸ ಉಳಿದಂತಾಯ್ತು?
ಈ ಬದುಕಿನಲ್ಲಿ ನಾವು ನಾವಾಗಿ ಬಾಳಬೇಕು. ನಮ್ಮ ನಂತರವೂ ನಮ್ಮತನ ಉಳಿಯಬೇಕು.
ನಮ್ಮೊಳಗಿನ ನಮಗೆ ಯಾವತ್ತೂ ಅಳಿವೆನ್ನುವುದು ಇರಲೇಬಾರದು ಎಂದು ನಿರ್ಧಾರ ಮಾಡಿ ಸಕಾರಾತ್ಮಕ ಮಾರ್ಗವನ್ನೇ ಸದಾ ಅನುಸರಿಸೊಣ.
ಅವರಿವರ ಸಂತೆ ಬಿಟ್ಟು copy cats ಆಗೊ ಬದಲು copyrighted ಆಗಿರೊಣ......
Friday, 28 November 2014
ನಾವು ನಾವಾಗಿರೋಣ..
Tuesday, 11 November 2014
ಖುಷಿ unlimited.....
ಇವತ್ತು ಬೆಳಿಗ್ಗೆ ನನ್ನ ಕೊಲಿಗ್ ಒಬ್ರು ಕೇಳ್ತಾ ಇದ್ರು
'ಏನ್ ಮೇಡಂ ಖುಷಿ-ಖುಷಿಯಾಗಿದ್ದಿರಿ, ಎನ್ ಸ್ಪೆಷಲ್ ?' ಅಂತ, ನನಗೆ ಆಶ್ಚರ್ಯ ಆಯ್ತು, ಖುಷಿಯಾಗಿರೋಕು ಒಂದು ಕಾರಣ ರೀಸನ್ ಅಂತ ಸ್ಪೆಷಲ್ ಆಗಿ ಬೇಕಾ? Actually ಖುಷಿ ಡಿಫೈನ್ ಮಾಡೋದು ತುಂಬಾ ಕಷ್ಟ. ಖುಷಿ ಅನ್ನೋದು ಲೈಫಲ್ಲಿ ಒಂಥರಾ ಆಕ್ಸಿಜನ್ ಇದ್ದಂತೆ ಪೂರೈಕೆ ಕಡಿಮೆ ಆದಷ್ಟು ಆಯಸ್ಸು ಕುಂಠಿತ ಆಗುತ್ತೆ. ಖುಷಿಯಾಗಿರೋದೆ ಜೀವನ ಹೊರತು ಖುಷಿನ ಹುಡುಕುವುದ್ರಲ್ಲೇ ಕಾಲ ಕಳೆಯೋದು ಜೀವನ ಅಲ್ಲ.
ಖುಷಿ ಅನ್ನೋದು ಹುಡುಕ್ತಾ ಹೋಗೊ ವಸ್ತುನೂ ಅಲ್ಲ ಆದರೆ ನಮ್ಮೊಳಗಿರುವ ಮನದ ಒಂದು ಭಾವ.
ಖುಷಿ ಪರ್ಫ್ಯೂಮ್ ಇದ್ದ ಹಾಗೆ ಹೊದಲ್ಲೆಲ್ಲ ಖುಷಿಯ ಪರಿಮಳ ಪಸರಿಸಬಲ್ಲದು.. ನಾವೆಷ್ಟೇ ಒತ್ತಡದಲ್ಲಿ ಇದ್ದಾಗ ಒಂದು ಸುಂದರ ಸ್ಮೈಲಿಯನ್ನೋ ಅಥವಾ ಕುಟುಂಬದ/ಪ್ರಿಯವಾದವರ ಫೊಟೊ ನೋಡಿ, ನಮಗೆ ಗೊತ್ತಿಲ್ದೇ ಒಂದು ಸ್ಟೈಲ್ ನಮ್ಮ ಮುಖದಲ್ಲೂ ಹಾದು ಹೋಗಿರುತ್ತೆ, ಹಾಗೇ ಒಂದು ಮುಗ್ಧ ಮಗುವಿನ ನಗು ನೋಡಿದಾಗ, ಕುಟುಂಬದ ಸದಸ್ಯರು/ಸ್ನೇಹಿತರು ಹರಟುತ್ತ ನಗುತ್ತಿರೋವಾಗ ಕಾರಣ ತಿಳಿದೇ ಇದ್ರೂ ನಾವೂ ಅವರೊಟ್ಟಿಗೆ ನಕ್ಕುಬಿಡುತ್ತೇವೆ. ಇದೇ ತಾನೇ ಖುಷಿಯ ಮ್ಯಾಜಿಕ್?
ಖುಷಿಗೆ ಹಲವು ಮುಖಗಳು. ಕೆಲವರಿಗೆ ಖುಷಿ ಅಂದ್ರೆ ಫೈವ್ ಸ್ಟಾರ್ ಹೋಟೆಲ್ ಊಟ, ಇನ್ನು ಕೆಲವರಿಗೆ ಬೀದಿ ಬದಿಯ ಪಾನಿ ಪೂರಿ. ಕೆಲವರಿಗೆ ಮಾರಿಷಸ್ ನಲ್ಲಿ ರಜೆ ಕಳೆಯೊದಾದ್ರೆ ಇನ್ನು ಕೆಲವರಿಗೆ ರಜೆಯ ಎಲ್ಲ ದಿನಗಳನ್ನು ಊರಲ್ಲಿರೋ ಅಮ್ಮ ಅಪ್ಪ ಕುಟುಂಬದೊಂದಿಗೆ ಕಳೆಯೋದು. ಹೀಗೆ ಹಲವು ರೀತಿ..
ನನಗಂತೂ ಖುಷಿ ಅಂದ್ರೆ ಪುಟ್ಟ ಪುಟ್ಟ ಸಂಗತಿಗಳಲ್ಲಿ ಖುಷಿ ಕಾಣೋದು, ಖುಷಿಯಾಗಿರೋದು, ಅಪ್ಪ ಅಮ್ಮ ತಂಗಿಯರೊಡನೆ ಕಾಲ ಕಳೆಯೋದು, ಗಾಡ್ಸ ಗಿಫ್ಟ್ ಅನ್ನೊ ತರಹ ಸಿಕ್ಕಿರೊ ಬಿಗ್ ಜಾಯಿಂಟ್ ಫ್ಯಾಮಿಲಿ ಜೊತೆ ಎಂಜಾಯ್ ಮಾಡೋದು, ಪ್ರಕೃತಿನಾ ಆಸ್ವಾದಿಸೋದು, ಸುಂದರ ದೃಶ್ಯಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯೋದು,
ಬೆಸ್ಟ್ ಫ್ರೆಂಡ್ಸ ಜೊತೆ ಕೆಲ ಹೊತ್ತು ಮಾತು ಹರಟೆ,
ಪುಸ್ತಕಗಳ ಲೋಕದಲ್ಲಿ ಮುಳುಗಿ ಹೋಗೋದು,ಓದು-ಬರಹ, ಒಂದಿಷ್ಟು ಒಳ್ಳೆ ಸಿನಿಮಾ ಸಂಗೀತ ಕೇಳೊದು, ನನ್ನ ಫೆವರಿಟ್ ಮ್ಯೂಸಿಕ್ ಲಿಸ್ಟ್ ರಿಪ್ಲೇ ಮಾಡೋದು.... ಹೀಗೆ ಖುಷಿ unlimited.. :)
ಖುಷಿಯ ಹುಡುಕಾಟ ನಿಲ್ಲಿಸಿ ಖುಷಿಯಾಗಿರಿ ಖಂಡಿತ ಖುಷಿ ನಿಮ್ಮನ್ನೇ ಹುಡುಕಿಕೊಂಡು ಬರುತ್ತೆ..
So be happy always..
Sabbe satta bhavanthu sukhitatta..
May all beings be happy.. :) :)
Sunday, 9 November 2014
ಹಾಗೆ ಸುಮ್ಮನೆ....
ಬದುಕು ಈ ನಡುವೆ ನನಗೆ ತಿಳಿಯದಂತೆ ಮಿಂಚಿನ ಓಟಕ್ಕಿಳಿದಿದೆ.. ಕಾಲೇಜು-ಮನೆ,ಪಾಠ-ತರಗತಿ, ಓದುಗಳ ಮಧ್ಯೆ ಸಮಯ ಸಾಗುವ ಪರಿ ಅರಿವಿಗೆ ಬರುತ್ತಿಲ್ಲ.. ದಿನನಿತ್ಯದ ಆದ್ಯತೆಗಳ ನಡುವೆ ನಾನೆಲ್ಲೋ ಕಳೆದು ಹೋಗುತ್ತಿರುವ ಭಾವ ಕಾಡುತ್ತಿದೆ..
ಸುಂದರ ಸೂರ್ಯೋದಯ ಸೂರ್ಯಾಸ್ತ ನೋಡದೇ
ದಿನಗಳೇ ಕಳೆದವು, ಈ weekend ಖಂಡಿತ ಊರಿಗೆ ಬರುವೆ plan pakka ಅಂತ ಅಣ್ಣ-ಅಕ್ಕಂದಿರಿಗೆ
ಕೊಟ್ಟ ಭರವಸೆಗೆ, ಅಮ್ಮ- ಅಪ್ಪ ಪುಟ್ಟ ತಂಗಿಯರ ಜೊತೆ ಕುಳಿತು ಹರಟೆ ಹೊಡೆದು ಸುಮಾರು ತಿಂಗಳುಗಳೇ ಉರುಳಿದವು.. ಅಬ್ಬಾ ಈ ಸಮಯ ಅನ್ನೋದು ಮಾರ್ಕೆಟ್ನಲ್ಲಿ ಸಿಗುವ ವಸ್ತುವಾಗಿದ್ರೆ ನಾನೇ ಎಲ್ಲ ಖರೀದಿ ಮಾಡಿ ಬಿಡ್ತಿದ್ನೇನೋ...
ಸಮಯ ಸಿಕ್ಕಾಗಲೆಲ್ಲ ತೋಚಿದ್ದು ಗೀಚಲು, ಒಂದಿಷ್ಟು ಕನಸು,ಮಾತು,ಕಥೆ,ಚಿತ್ರ,ಸ್ಪೂರ್ತಿ, ಭಾವನೆಗಳಿಗೆ ಅಚ್ಚೊದಗಿಸುವ ನಿಟ್ಟಿನಲ್ಲಿ ಬ್ಲಾಗ್ ಬರೆಯುವ ಪ್ರಯತ್ನ..
ನಾನು ತೋಚಿದ್ದನ್ನು ಗೀಚಿದಾಗಲೆಲ್ಲ ನನ್ನನ್ನು ಪ್ರೀತಿಯಿಂದ ಬರೆಯುವ ಪ್ರಯತ್ನಕ್ಕೆ ಪ್ರೇರೆಪಿಸಿದ ನನ್ನ ಅಪ್ಪ-ಅಮ್ಮ ,ಮುದ್ದು ತಂಗಿಯರು, ಅಣ್ಣ ಅಕ್ಕಂದಿರು ಮತ್ತು ಎಲ್ಲ ಸಹೃದಯಿಗಳಿಗೆ, ಅಕ್ಕನ ಪುಟ್ಟ ಪಾಪು
"ಸಮನ್ವಿತಾ"ಳಿಗೆ ಈ ಬ್ಲಾಗ್ ನ ಮೊದಲ ಪುಟ ಸಮರ್ಪಣೆ..
ಹಾಗೆ ಸುಮ್ಮನೆ ಒಂದಿಷ್ಟು ಕನಸು ಸ್ಪೂರ್ತಿ ಮಾತುಗಳ ಅಭಿಪ್ರಾಯ ಅನಿಸಿಕೆಗಳ ಚಿತ್ರ-ಕಥೆ ಭಾವ-ಲಹರಿ ಇಂದಿನಿಂದ..